Duration 4:21

Hakka Bukka Vijayanagara sāmrājya

3 037 watched
0
170
Published 17 Apr 2020

ದಿನಾಂಕ 18.4.2020 ರಂದು ಕರ್ನಾಟಕ ಸಾಮ್ರಾಜ್ಯ (ವಿಜಯನಗರ ಸಾಮ್ರಾಜ್ಯ) ಉದಯಿಸಿದ ದಿನ.(18.4.1336) *************************** ಅಖಂಡ ಕರ್ನಾಟಕದ ಬೇಡ ಜನಾಂಗವು ತಮ್ಮ ಶಕ್ತಿ ಸಾಮರ್ಥ್ಯದಿಂದ ಹಾಗೂ ನಾಡ ಪ್ರೇಮದಿಂದ ಸರ್ವ ಬುಡಕಟ್ಟು ಜನರನ್ನು ತಮ್ಮ ನಾಯಕತ್ವದಲ್ಲಿ ಒಗ್ಗೂಡಿಸಿಕೊಂಡು ವಿಜಯನಗರ ಸಾಮ್ರಾಜ್ಯವನ್ನ ಸ್ಥಾಪಿಸಿ (18.4.1336) ತನ್ಮೂಲಕ ನಾಡರಕ್ಷಣೆಯನ್ನು ಪ್ರಜೆಗಳ ಪ್ರಾಣ ರಕ್ಷಣೆಯನ್ನು ಮಾಡಿ ಪರಕೀಯರ ದಾಳಿಗಳನ್ನು ನೂರಾರು ವರ್ಷಗಳ ಕಾಲ ಶೂರತನದಿಂದ,ಧೈರ್ಯದಿಂದ, ಬುದ್ದಿಬಲದಿಂದ ರಕ್ಷಿಸಿಕೊಂಡು ಬಂದ ನಿಷ್ಟಾವಂತರು ಈ ಬೇಡ ವಾಲ್ಮೀಕಿ ನಾಯಕ ವಂಶಜರು... ಮೊಟ್ಟಮೊದಲು ಕರ್ನಾಟಕದಲ್ಲಿ ಆನೆಗೊಂದಿ, ಕುಮ್ಮಟದುರ್ಗ,ಹೊಸಮಲೆದುರ್ಗ,ಹಂಪಿ ಸ್ಥಳಗಳನ್ನ ಮೂಲವಾಗಿಟ್ಟುಕೊಂಡು ಕರ್ನಾಟಕ ಸಾಮ್ರಾಜ್ಯವನ್ನು ಅಂದರೆ ವಿಜಯನಗರ ಸಾಮ್ರಾಜ್ಯವನ್ನು ಸ್ಥಾಪಿಸಿದ ದಿನವೇ ದಿನಾಂಕ 18.4.2020... ಈ ಸಾಮ್ರಾಜ್ಯದ ಉದಯಕ್ಕೆ ಮೂಲ ಕಾರಣರಾದ ಶ್ರೀಮನ್ಮಹಾನಾಯಕಾಚಾರ್ಯರಾದ ಮುಮ್ಮಡಿ ಸಿಂಗೆಯನಾಯಕ, ವೀರಕಂಪಿಲರಾಯ, ಗಂಡುಗಲಿ ಕುಮಾರರಾಮ, ಹಕ್ಕ-ಬುಕ್ಕರು, ಶ್ರೀಕೃಷ್ಣದೇವರಾಯ ಇವರೇ ಮೊದಲಾದ ನಾಯಕ ಶಿರೋಮಣಿಗಳನ್ನು ಸ್ಮರಿಸಿಕೊಳ್ಳುವ ಮೂಲಕ ದಿನಾಂಕ 18.4.2020 ರಂದು ವಿಜಯನಗರ ಸಾಮ್ರಾಜ್ಯ ಸ್ಥಾಪನಾ ದಿನಾಚರಣೆಯನ್ನ ಆಚರಿಸಬೇಕು. ಈ 2020 ನೇ ವರ್ಷದಲ್ಲಿ ಕೋವಿಡ್-19 ರ ಆಕ್ರಮಣದಿಂದ ಇಡೀ ವಿಶ್ವವೇ ತಲ್ಲಣಿಸಿ ಹೋಗಿರುವುದರಿಂದ ಹಾಗೂ ನಮ್ಮ ರಾಜ್ಯವೂ ಸಹ ಈ ಭಯಾನಕ ರೋಗಕ್ಕೆ ತುತ್ತಾಗಿರುವುದರಿಂದ, ನಾವ್ಯಾರೂ ನಮ್ಮ ನಮ್ಮ ಮನೆಗಳಿಂದ ಹೊರಗೆ ಬರದೆ ಈ ರೋಗವನ್ನ ತಡೆಗಟ್ಟಬೇಕಾಗಿದೆ,ಈ ರೋಗವನ್ನು ನಮ್ಮ ನೆಲದಿಂದ ನಿರ್ನಾಮ ಮಾಡಬೇಕಾದರೆ ಸರಕಾರವು ಆಗಿಂದಾಗ್ಗೆ ನೀಡುತ್ತಿರುವ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಲೇಬೇಕು... ಆದಕಾರಣ ಈ ವರ್ಷ ನಾವೆಲ್ಲರೂ ನಮ್ಮ ನಮ್ಮ ಮನೆಗಳಲ್ಲಿ ಮುಖ್ಯವಾಗಿ ಗಂಡುಗಲಿ ಕುಮಾರರಾಮ, ಹಕ್ಕ- ಬುಕ್ಕರು, ಶ್ರೀಕೃಷ್ಣದೇವರಾಯರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸುವ ಮೂಲಕ ವಿಜಯನಗರ ಸಾಮ್ರಾಜ್ಯ ಸ್ಥಾಪನಾ ದಿನಾಚರಣೆಯನ್ನ ಅತ್ಯಂತ ಸರಳವಾಗಿ ಆಚರಿಸಬೇಕೆಂದು ತಮ್ಮಲ್ಲಿ ನಾನು ವೈಯಕ್ತಿಕವಾಗಿ ಮನವಿ ಮಾಡುವೆನು...

Category

Show more

Comments - 20